ಬೇಥುವಾಡಹರಿ ವನ್ಯಜೀವಿ ಅಭಯಾರಣ್ಯವು ಭಾರತದ ಪಶ್ಚಿಮ ಬಂಗಾಳ ರಾಜ್ಯದ ನಾಡಿಯಾ ಜಿಲ್ಲೆಯ ಬೇಥುವಾಡಹರಿ ಪಟ್ಟಣದಲ್ಲಿ (ನಕಾಶಿಪಾರಾ ಪ್ರದೇಶ) ಸ್ಥಿತವಾಗಿದೆ. ಈ ಅಭಯಾರಣ್ಯವು ರಾಷ್ಟ್ರೀಯ ಹೆದ್ದಾರಿ ೩೪ರ ಪಕ್ಕದಲ್ಲಿದೆ. ಈ ಅಭಯಾರಣ್ಯವು ೬೭ ಹೆಕ್ಟೇರುಗಳನ್ನು ಆವರಿಸಿದೆ. ಮಧ್ಯ ಗಂಗಾ ಮೆಕ್ಕಲು ಮಣ್ಣು ವಲಯದ ಒಂದು ಭಾಗವನ್ನು ಸಂರಕ್ಷಿಸಲು ಇದನ್ನು ೧೯೮೦ರಲ್ಲಿ ಸ್ಥಾಪಿಸಲಾಯಿತು. ಈ ಅಭಯಾರಣ್ಯವು ಚೀತಲ್, ಗುಳ್ಳೆನರಿ, ಬಂಗಾಳ ನರಿ, ಮುಳ್ಳುಹಂದಿ ಮತ್ತು ಲಂಗೂರ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿದೆ. ಪಕ್ಷಿ ಜಾತಿಗಳಲ್ಲಿ ಪ್ಯಾರಕೀಟ್‍ಗಳು, ಭಾರತೀಯ ಕೋಗಿಲೆಗಳು, ಮುಲ್ಲಾ ಹಕ್ಕಿಗಳು ಹಾಗೂ ಇತರ ಹೆಚ್ಚು ಚಿಕ್ಕ ಪಕ್ಷಿಗಳು ಸೇರಿವೆ, ಸರೀಸೃಪಗಳು ಮತ್ತು ಉಭಯಚರಗಳಲ್ಲಿ ಹೆಬ್ಬಾವುಗಳು, ಮಾನಿಟರ್ ಹಲ್ಲಿಗಳು ಮತ್ತು ಒಂದು ಪ್ರಕಾರದ ಚಿಕ್ಕ ಮೊಸಳೆಯಾದ ಘಡಿಯಾಲ್‍ಗಳು ಸೇರಿವೆ. ಈ ಅಭಯಾರಣ್ಯವು ಆರಂಭಿಕ ಛಾಯಾಗ್ರಾಹಕ್ರು, ಪ್ರವಾಸಿಗಳು ಇತ್ಯಾದಿಗಳಿಗೆ ಅದ್ಭುತ ಸ್ಥಳವಾಗಿದೆ. == ಉಲ್ಲೇಖಗಳು ==